ಲಿಂಕ್ಸ್
ಉತ್ತರ ಖಗೋಳಾಕಾಶದ ಒಂದು ನಕ್ಷತ್ರಪುಂಜ. ಸನ್ನಿಹಿತ ಸ್ಥಾನ: ವಿಷುವದಂಶ 8ಗಂ.; ಘಂಟಾವೃತ್ತಾಂಶ 45ಮಿ ಉತ್ತರ. ಸಪ್ತರ್ಷಿಮಂಡಲ ಪುಂಜದ ಸಮೀಪದಲ್ಲಿದೆ. ಮೂರನೆಯ ಕಾಂತಿಮಾನದ ಪ್ರಧಾನ ನಕ್ಷತ್ರ 40 ಆಲ್ಫ ಸೂರ್ಯನಿಂದ 180 ಬೆಳಕುವರ್ಷಗಳ ದೂರದಲ್ಲಿದೆ. ಏ5 ರೋಹಿತಪ್ರರೂಪದ್ದು. ಕೆಲವೊಂದು ಚರಕಾಂತೀಯ ನಕ್ಷತ್ರಗಳೂ ತಾರಾಗುಚ್ಛಗಳೂ ನೀಹಾರಿಕೆಗಳೂ ಈ ಪುಂಜದಲ್ಲಿವೆ. ನಾಲ್ಕನೆಯ ಕಾಂತಿಮಾನದ ಕೆಲವೊಂದು ನಕ್ಷತ್ರಗಳೂ ಇವೆ.
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ